Best Documentary Contest
about Legendary Actor & Comedian Late Sri Narasimharaju
on the eve of his 100th Anniversary.
‘Hasya Chakravarthy’ Sri Narasimha Raju.
Dr.Rajkumar’s movies are immediately remembered with Narasimha Raju. Narasimha Raju, who was a co-artist with Dr.Rajkumar in the Gubbi company, made his entry into Kannada cinema with the film ‘Bedara Kannappa’ and grew up to become a renowned actor named ‘Hasya Chakravarthy’ Narasimha Raju.
He was uneducated, unattractive, and an actor, who had a ready-made formula, and grew up to be a highly sought-after comedy actor in the Kannada film industry.
If Narasimha Raju did not act in a film, the audience would not flock to the theaters to watch that film! To that extent, the film would have been incomplete without Narasimha Raju along with the hero. Especially Dr. Rajkumar was also remembered with the late Sri Narasimha Raju, a true rural theater genius. Narasimha Raju, who has been compared to the world’s greatest talent ‘Charlie Chaplin, is a great actor who has entertained and influenced a generation of audiences with his pure comedy and acting.
Apart from the details of his birth, family, home children, etc. which are available on the internet, this is a small attempt to record his personality-image-personality by documenting his hundredth birth year in a meaningful way.
An open welcome to those interested in documenting the proud talent that has impressed us and passed it on to future generations.
This effort will be considered separately from the ‘Brain Share TV Cult Short Film Awards. Along with certification, trophies, and financial assistance will also be given.
Register Now
ಹಾಸ್ಯ ಚಕ್ರವರ್ತಿ ಶ್ರೀ ನರಸಿಂಹರಾಜು.
ಡಾ.ರಾಜಕುಮಾರ್ ಸಿನಿಮಾಗಳು ಅಂದ ಕೂಡಲೇ ಅವರ ಜೊತೆಯಲ್ಲೇ ನೆನಪಾಗುತ್ತಿದ್ದುದು ನರಸಿಂಹರಾಜು ಅವರು.
ಗುಬ್ಬಿ ಕಂಪನಿಯಲ್ಲಿ ಡಾ.ರಾಜಕುಮಾರ್ ಅವರೊಟ್ಟಿಗೆ ಸಹ ಕಲಾವಿದರಾಗಿದ್ದ ನರಸಿಂಹರಾಜು ‘ಬೇಡರ ಕಣ್ಣಪ್ಪ’ ಚಿತ್ರದೊಂದಿಗೆ ಅವರ ಕನ್ನಡ ಚಿತ್ರರಂಗದ ಪ್ರವೇಶವಾಗಿ ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಎಂಬ ಬಿರುದಾಂಕಿತ ಮೇರು ನಟನಾಗಿ ಬೆಳೆಯುತ್ತಾರೆ.
ಅಷ್ಟೇನು ಓದಿರದ, ಸುಂದರವಲ್ಲದ, ನಟನೆಂದರೆ ಹೀಗಿರಬೇಕು ಎಂಬ ಸಿದ್ದ ಸೂತ್ರದ ಚೌಕಟ್ಟಿನ ಆಚಾಯೇ ಇದ್ದ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ನಟನಾಗಿ ಬೆಳೆದರು. ನರಸಿಂಹರಾಜು ಅವರು ಒಂದು ಚಿತ್ರದಲ್ಲಿ ನಟಿಸಿಲ್ಲವೆಂದರೆ ಪ್ರೇಕ್ಷಕರು ಆ ಚಿತ್ರವನ್ನು ನೋಡಲು ಚಿತ್ರಮಂದಿರದ ಕಡೆಗೆ ಸುಳಿಯುತ್ತಿರಲಿಲ್ಲ! ಅಷ್ಟರ ಮಟ್ಟಿಗೆ ನಾಯಕನ ಜೊತೆಗೆ ನರಸಿಂಹರಾಜು ಅವರಿಲ್ಲದಿದ್ದರೆ ಆ ಚಿತ್ರ ಅಪೂರ್ಣ ಎಂಬಂತಿತ್ತು. ಅದರಲ್ಲೂ ಡಾ. ರಾಜಕುಮಾರ್ ಅಂದಕೂಡಲೇ ಜೊತೆಯಲ್ಲೇ ನೆನಪಾಗುತ್ತಿದ್ದುದು ಅಪ್ಪಟ ಗ್ರಾಮೀಣ ರಂಗಭೂಮಿ ಪ್ರತಿಭೆ ದಿವಂಗತ ಶ್ರೀ ನರಸಿಂಹರಾಜು ಅವರದ್ದು.
ಪ್ರಪಂಚದ ಶ್ರೇಷ್ಠ ಪ್ರತಿಭೆ ‘ಚಾರ್ಲಿ ಚಾಪ್ಲಿನ್’ ಗೆ ಹೋಲಿಸಲಾಗುತ್ತಿದ್ದ ನರಸಿಂಹರಾಜು ಅವರು ತಮ್ಮ ಪರಿಶುದ್ಧ ಹಾಸ್ಯ ಹಾಗೂ ನಟನೆಯಿಂದ ಒಂದು ತಲೆಮಾರಿನ ಪ್ರೇಕ್ಷಕರನ್ನು ರಂಜಿಸಿ ಪ್ರಭಾವ ಬೀರಿದ ಶ್ರೇಷ್ಠ ನಟ.
ಅವರ ಹುಟ್ಟು, ಕುಟುಂಬ, ಮನೆ-ಮಕ್ಕಳು ಇತ್ಯಾದಿ ಇಂಟರ್ನೆಟ್ ನಲ್ಲಿ ಸಿಗುವ ವಿವರಗಳ ಹೊರತಾಗಿ ಅವರ ಕಾಯಕ-ಕಾಣ್ಕೆ-ವ್ಯಕ್ತಿತ್ವವನ್ನು ಡಾಕ್ಯುಮೆಂಟರ್ ದಾಖಲಿಸಿ ಅವರ ನೂರನೇ ಜನ್ಮ ವರ್ಷವನ್ನು ಅರ್ಥಪೂರ್ಣವಾಗಿ ನೆನೆಯುವ ಪುಟ್ಟ ಪ್ರಯತ್ನ ಇದು.
ನಮ್ಮ ನಡುವಿದ್ದು ನಮ್ಮನ್ನು ಪ್ರಭಾವಗೊಳಿಸಿದ ನಮ್ಮ ಹೆಮ್ಮೆಯ ಪ್ರತಿಭೆಯನ್ನು ದಾಖಲಿಸಿ ಮುಂದಿನ ತಲೆಮಾರುಗಳಿಗೂ ದಾಟಿಸುವ ಆಸಕ್ತ ಮನಸುಗಳಿಗೆ ಮುಕ್ತ ಸ್ವಾಗತ.
ಈ ಪ್ರಯತ್ನವನ್ನು ‘ಬ್ರೈನ್ ಶೇರ್ ಟಿವಿ ಕಲ್ಟ್ ಶಾರ್ಟ್ ಫಿಲಂ ಅವಾರ್ಡ್ಸ್’ ನ ಹೊರತಾಗಿ ವಿಶೇಷವಾಗಿ ಪರಿಗಣಿಸಲಾಗುವುದು. ಸರ್ಟಿಫಿಕೇಶನ್, ಟ್ರೋಫಿಯ ಜೊತೆಗೆ ಧನ ಸಹಾಯವನ್ನೂ ನೀಡಲಾಗುವುದು.
Jury

Mr. X

Ms. X

Mr. Y
